Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಟಿ ರೂಪಿಕಾಗೆ 19 ರ ಹುಟ್ಟುಹಬ್ಬದ ಸಂಭ್ರಮ
Posted date: 24 Sat, Aug 2013 – 05:09:39 PM
ಚೆಲುವಿನ ಚಿಲಿ ಪಿಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಮುದ್ದು ಮುಖದ ಚೆಲುವೆ ರೂಪಿಕಾಗೆ  19 ರ ಹುಟ್ಟುಹಬ್ಬದ ಸಂಭ್ರಮ.ಮೊನ್ನೆ ಅವೇಕ್ ವಿಶ್ವ ಸೇನಾ ಫೌಂಡೇಶನ್,ನ ಅಂಧ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರೂಪಿಕಾ,ಅವರಿಗಾಗಿ 10 ಸಾವಿರ ರೂಗಳ ಸಹಾಯವನ್ನೂ ಮಾಡಿ ಮಾನವೀಯತೆ ಮೆರೆದರು. ಈ ಸಂದಭ್ದಲ್ಲಿ  ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಹುಟ್ಟುಹಬ್ಬದ ಹಿನ್ನನಲೆಯಲ್ಲಿ ಹೊಸಸಿದ್ದಾಂತವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.ಇನ್ನು ಮುಂದೆ ಹುಟ್ಟು ಹಬ್ಬವನ್ನು ಪ್ರತಿ ಭಾರಿ ಅಂಧ ಮಕ್ಕಳೊಂದಿಗೆ ಆಚರಿಸುವುದು, ಶಿಕ್ಷಣ ಮುಂದುವರಿಸುವುದು ಭರತನಾಟ್ಯದಲ್ಲಿ ಪಿಎಚ್ ಡಿ ಪಡೆಯುವ ಆಸೆಯನ್ನು ಇದೇ ವೇಳೆ ರೂಪಿಕಾ ಹೊಂದಿದ್ದಾರೆ.ಸದ್ಯ ಅವರ ಕೈಯಲ್ಲಿ ಉಮೇಶ್ ರೆಡ್ಡಿ, ಕಲಿಗಾಲ, ಘಷ೵ಣೆ ಸೇರಿದಂತೆ ಒಂದೆರಡು ಚಿತ್ರಗಳಿವೆ.20 ಕ್ಕೂ ಹೆಚ್ಚು ದಾರಾವಾಹಿಗಳು ಹಾಗು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ ಹೆಗ್ಗಳಿಕೆಯೂ ಈಕೆಯದು. ಮೇಲಾಗಿ ರೂಪಿಕಾ ಭರತ ನಾಟ್ಯ ಕಲಾವಿದೆ. ದೇಶದ ಉದ್ದಗಲಕ್ಕೂ  ಮೂರು ಸಾವಿರಕ್ಕೂ ಹೆಚ್ಚು ಪ್ರದಶ್೵ನ ನೀಡಿ ಸೈ ಎನಿಸಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಟಿ ರೂಪಿಕಾಗೆ 19 ರ ಹುಟ್ಟುಹಬ್ಬದ ಸಂಭ್ರಮ - Chitratara.com
Copyright 2009 chitratara.com Reproduction is forbidden unless authorized. All rights reserved.